ಸೂರ್ಯ ಕಣ್ಣು ಬಿಡುವ ಮೊದಲೇ
ನನ್ನ ಅರ್ಧ ದಿನ ಕಳೆದಿದೆ..
ಬಿಸಿಲು ನೆತ್ತಿಗೇರುವ ಮೊದಲೇ
ಪಟ್ಟಣ ತಲುಪಬೇಕಿದೆ..
ಕೊಕ್ಕರೆ ಕಾಲು ಹಾಕಿ
ನದಿಯನ್ನೂ ದಾಟಿದೆ..
ದಣಿವಿನ ಅರಿವೂ ತಿಳಿಯದಂತೆ
ಈ ದೊಂಬರಾಟ ನಡೆದಿದೆ..
ಕತ್ತಲಾಗೋ ಮುಂಚೆ ಮತ್ತೆ
ಮನೆಯ ಸೇರಬೇಕಿದೆ..
ಉಳಿದ ಕೆಲಸ ಮುಗಿಸಲಿನ್ನೂ
ಅರ್ಧ ದಿನ ಬೇಕಿದೆ..
Cheers,
Priyanka!
Comments
Post a Comment