ಬದುಕು ಪುಸ್ತಕದ ಹಾಳೆ !!


ಥೀಮ್ -ಚಿತ್ರಕ್ಕೊಂದು ಕವನ

ಬದುಕು ಪುಸ್ತಕದ ಹಾಳೆ.


ಪುಸ್ತಕವು ಒಂದು ಜ್ಣಾನದ ಭಂಡಾರ
ತೆರೆದಿಟ್ಟ ಪುಸ್ತಕವು ಬದುಕಿನ
ಬಿಚ್ಚಿಟ್ಟ ಮನಸ್ಸಿನ ಹಾಗೆ.

ಎಂತವರನ್ನು ಬದಲಿಸ ಬಲ್ಲದು
ಪುಸ್ತಕ ಓದುವ ಹವ್ಯಾಸ
ಅರಿತು ಓದಿದರೆ ತಿಳಿಯುವುದು ಅದರಲ್ಲಿನ ಅರ್ತ
ಅರಿಯದೇ ಓದಿದರೆ, ಓದಿದರೂ ವ್ಯರ್ತ

ಪುಸ್ತಕದ ವಿಷಯಗಳು ಹತ್ತು ಹಲವಾರು
ಎಷ್ಟು ಓದಿದರು ಮುಗಿಯದು ಅದರ ಹುಮ್ಮಸ್ಸು
ಒಂದಂದೂ ಅದ್ಯಾಯಕೂ ಒಂದೊಂದು ಅರ್ತ
ಅರ್ತ ಮಾಡಿಕೊಂಡವನು ಜೀವನದಲ್ಲಿ ಸಮರ್ಥ.

ಬದುಕು ಒಂದು ಪುಸ್ತಕದ ಹಾಳೆ
ಪುಟ ತಿರುವಿದಾಗ ಜೀವನದಲ್ಲಿ ಕಳೆ ಕಳೆ
ಪುಸ್ತಕ ಬರೆದು ಹಚ್ಚಬೇಕು ಜ್ಣಾನದ ದೀವಿಗೆ
ಓದಿ ಚಲ್ಲಬೇಕು ಜ್ಣಾನದ ಬೆಳಕು.

ಓದು ಸಾಕೆನಿಸಿದಾಗ ತೆಗೆದಿಡಬೇಕು
ಕಣ್ಣಿಗೆ ಹಾಕಿದ ಚಾಳೀಸು
ವಿಶ್ರಾಂತಿಯಿಂದ ಜೀವಿಸಬೇಕು
ನಮ್ಮ ಬದುಕನು.

--- ಪ್ರಿಯಾಂಕಾ!!

Comments

Popular Posts